ಕಂಡೆ ನಾ ಗೋವಿಂದನ
ಪುಂಡರೀಕಾಕ್ಷ ಪಾಂಡವ ಪಕ್ಷನ
ಕೇಶವ ನಾರಾಯಣ ಶ್ರೀ ಕೃಷ್ಣನ
ವಾಸುದೇವ ಅಚ್ಯುತಾನಂತನ ||
ಸಾಸಿರ ನಾಮದ ಶ್ರೀ ಹೃಷಿಕೇಶನ
ಶೇಷಶಯನ ನಮ್ಮ ವಸುದೇವ ಸುತನ
ಮಾಧವ ಮಧುಸೂದನ ತ್ರಿವಿಕ್ರಮನ
ಯಾದವ ಕುಲಜನ ಮುನಿವಂದ್ಯನ ॥
ವೇದಾಂತ ವೇದ್ಯನ ಶ್ರೀ ಇಂದಿರೆ ರಮಣನ -
ನಾದಿ ಮೂರುತಿ ಪ್ರಹ್ಲಾದವರದನ
ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತ ವಜ್ರಪಂಜರನ |
ಕರುಣಾಕರ ನಮ್ಮ ಪುರಂದರ ವಿಠಲನ
ನೆರೆ ನಂಬಿದೆನು ಬೇಲೂರ ಚೆನ್ನಿಗನ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ