ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ ಸಾರ್ವಭೌಮನ
ಕಾಮಿತಾರ್ಥವನೀವ ದೇವನ ಕರುಣ
ನಿಧಿಯೆಂದೆನಿಸಿ ಮೆರೆವನ
ಕೋಟಿ ಸೂರ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನು
ನೋಟಕ್ಕಚ್ಚರಿಯೆನಿಪ ನಗೆಮೊಗ
ನೊಸಲೊಳಗೆ ತಿರುಮಣಿಯ ಕಂಡೆನು
ಸಾಟಿಯಿಲ್ಲದ ಶಂಖ-ಚಕ್ರವ ಚತುರ ಹಸ್ತದಲೀಗ ಕಂಡೆನು
ಬೂಟಕದ ಮಾತಲ್ಲ ಕೇಳಿ-ಭೂರಿದೈವದ ಗಂಡನಂಘ್ರಿಯ
ತಪ್ಪುಗಾಣಿಕೆ ಕಪ್ಪಗಳನು ಸಪ್ತಲೋಕಗಳಿಂದ ತರಿಸುವ
ಉಪ್ಪು ವೋಗರವನ್ನು ಮಾರಿಸಿ
ಉಚಿತದಿಂದಲಿ ಹಣವ ಗಳಿಸುವ ॥
ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ ಒಪ್ಪದಿಂದ
ಕ್ರಯ ಮಾಡಿಕೊಡಿಸುವ
ಸರ್ಪಶಯನನ ಸಾರ್ವಭೌಮನ ಅಪ್ಪ
ವೆಂಕಟರಮಣನಂಘ್ರಿಯ
ಉರದಿ ಶ್ರೀದೇವಿ ಇರಲು ಕಂಡೆನು
ಉನ್ನತದ ಕೌಸ್ತುಭವ ಕಂಡೆನು
ಗರುಡ ಕಿನ್ನರ ನಾರದಾದಿಗಳಿರಲು ಎಡಬಲದಲ್ಲಿ ಕಂಡೆನು ||
ತರತರದಿ ಭಕ್ತರಿಗೆ ವರಗಳ ಕರೆದು
ಕೊಡುವುದ ನಾನು ಕಂಡೆನು
ಶರಧಿಶಯನನ ಶೇಷಗಿರಿವರ ಸಿರಿ ಪುರಂದರ ವಿಠಲನಂಘ್ರಿಯ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ