ಕಂಡೆ ಕಂಡೆ ಕಂಡೆನಯ್ಯಾ ಕಂಗಳ ದಣಿಯುವ ತನಕ
ಮಂಗಳ ಮೂರುತಿ ಮನ್ನಾರು ಕೃಷ್ಣನ
ಉಟ್ಟ ಪೀತಾಂಬರ ಕಂಡೆ ತೊಟ್ಟ ವಜ್ರದಂಗಿ ಕಂಡೆ
ದಕ್ಷಿಣದ ದ್ವಾರಕಿ ಮನ್ನಾರು ಕೃಷ್ಣನ
ಕಡೆವ ಕಡೆಗೋಲ ಕಂಡೆ ನಡುವಿನೊಡ್ಯಾಣ ಕಂಡೆ
ಕಡು ಮುದ್ದು ಮನ್ನಾರು ಕೃಷ್ಣನ ಕಂಡೆ
ದೇವಕಿ ದೇವಿಯರ ಕಂಡೆ ಗೋಪಿಯರ ಮುದ್ದಾಟ ಕಂಡೆ
ಮಾವ ಕಂಸನ ಮರ್ದನ ಶ್ರೀ ಕೃಷ್ಣನ
ಆಕಳ ಕಾವುದ ಕಂಡೆ ಗೋಪಾಲಕೃಷ್ಣನ ಕಂಡೆ
ವೈಕುಂಠವಾಸನ ಮನ್ನಾರು ಕೃಷ್ಣನ
ಶೇಷನ ಹಾಸಿಕೆಯ ಕಂಡೆ ಸಾಸಿರ ನಾಮನ ಕಂಡೆ
ಶ್ರೀಶ ಪುರಂದರ ವಿಠಲ ಕೃಷ್ಣರಾಯನ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ