ಏನನಿತ್ತು ಮೆಚ್ಚಿಸುವೆನು ಏನೋ ವಿಠಲ
ಮಾನಿನಿಯರಸ ನಿನ್ನ ನಾಮವನ್ನೆ ನೆನೆವೆನಯ್ಯ
ಓದಿ ನಿನ್ನ ಮೆಚ್ಚಿಸುವೆನೆ ವೇದವನ್ನು ಅಜನಿಗಿತ್ತೆ
ವಾದಿಸಿ ನಿನ್ನ ಮೆಚ್ಚಿಸುವೆನೆ ಆದಿಶೇಷಶಯನನೆ
ಆಡಿ ನಿನ್ನ ಮೆಚ್ಚಿಸುವೆನೆ ಮೃಡನಯ್ಯನಯ್ಯನೆ
ಪಾಡಿ ನಿನ್ನ ಮೆಚ್ಚಿಸುವೆನೆ ಪವನಜನೊಡೆಯನೆ
ಚಿನ್ನವಿತ್ತು ಮೆಚ್ಚಿಸುವೆನೆ ಸಿರಿದೇವಿಯ ರಮಣನೆ
ಪೂರ್ಣಾನಂದ ಜ್ಞಾನಿ ನೀನೆ ಪುರಂದರ ವಿಠಲಯ್ಯ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ