ಕೀರ್ತನೆ - 243     
 
ಏಕೆ ಚಿಂತಿಪೆ ಬರಿದೆ ನೀ ವಿಧಿ ಬರೆದ | ವಾಕು ತಪ್ಪದು ಪಣೆಯೊಳು ಹುಟ್ಟುವುದಕೆ ಮೊದಲೆ ತಾಯ್ಮೊಲೆಯೊಳು | ಇಟ್ಟಿದ್ದೆಯೊ ಪಾಲನು ॥ ತೊಟ್ಟಿಲೊಳಿರುವಾಗಲೆ - ಗಳಿಸಿ ತಂ - | ದಿಟ್ಟು ಕೊಂಡುಣುತಿದ್ದೀಯಾ | ಉರಗ ವೃಶ್ಚಿಕ ಪಾವಕ ಕರಿ ಸಿಂಹ | ಅರಸು ಹುಲಿ ಚೋರ ಭಯವು ।। ಹರಿಯಾಜ್ಞೆಯಿಂದಲ್ಲದೆ ಇವು ಏಳು ಶರಧಿ ಪೊಕ್ಕರು ಬಿಡವೊ ಮರುಳೆ ಇಂತು ಸುಖ ದುಃಖದೊ೵ಳ್ಸಿಲುಕಿ ಮರುಗಿ ನೀನು | ಭ್ರಾಂತನಾಗಿ ಕೆಡಬೇಡವೊ || ಸಂತೋಷದಿಂದ ಅರ್ಚಿಸಿ ಭಜಿಸೋ ನೀ । ಸಂತತ ಪುರಂದರ ವಿಠಲನ ಮರುಳೆ