ಕೀರ್ತನೆ - 242     
 
ಏಕೆ ಗೋಪಾಲ ಕರೆಯುತಾನೆ - ಎಲೆ ಸಖಿಯೆ ಎನ್ನ | ಏಕೆ ಗೋಪಾಲ ಕರೆಯುತಾನೆ ? ಕಣ್ಣ ಸನ್ನೆ ಮಾಡುತಾನೆ ಮತ್ತೆ ಬಗೆ ಬಗೆ | ಹಣ್ಣ ಕೈಯಲಿ ತೋರುತಾನೆ ಎನ್ನ ಚೆಲುವಿಕೆ ॥ ಬಣ್ಣಿಸುತಲಿ ತಿರುಗುತಾನೆ ಇವನೇನೆ । ಇನ್ನೂರು ವರಹಗಳ ಕೊಟ್ಟು ಮದುವೆಯಾದನೇನೆ ಎಲೆ ಸಖಿಯೆ ಹವಳ ಸರವ ತೋರುತಾನೆ ದುಂಡು ಮುತ್ತಿನ – | ಧವಳ ಹಾರವ ನೀಡುತಾನೆ ಹಾಸಿಗೆಯ ಮೇಲೆ ॥ ಪವಡಿಸಬೇಕೆನುತಾನೆ ಇವನೊಡನಿರಲು ನ-| ಮ್ಮವರು ಸುಮ್ಮನೆ ಇಹರೇನೆ ಎಲೆ ಸಖಿಯೆ ಬಟ್ಟಲ ಪಿಡಿದು ಬರುತಾನೆ ಹಗಲೆ ಬಾ ಎಂದು - | ಬಟ್ಟ ಬಯಲೊಳು ಕರೆಯುತಾನೆ ಎನ್ನ ಮನದೊಳು || ದಟ್ಟು ಧಿಗಿಲು ಎನ್ನದೇನೆ ಪುರಂದರವಿಠಲ - | ಇಟ್ಟು ಕೊರಳಾಣೆ ಈಗ ಬಾ ಎಂಬುವನೆ ಎಲೆ ಸಖಿಯೆ