ಎನ್ನ ರಕ್ಷಿಸೊ ನೀನು - ದೇವರ ದೇವ
ಎನ್ನ ರಕ್ಷಿಸೊ ನೀನು ಯಾದವ ಕುಲಮಣಿ
ಮುನ್ನ ದೌಪದಿಯಭಿಮಾನ ಕಾಯ್ದ ಕೃಷ್ಣ
ಬಾಲನ ಮೊರೆಯನು ಕೇಳಿ ಕೃಪೆಯಿಂದ
ಪಾಲಿಸಿದೆಯೊ ನರಸಿಂಹ ರೂಪದಿಂದ
ಪಾಷಾಣ ಚರಣದಿ ಯೋಷಿದ್ರೂಪವ ಗೈದೆ
ದೋಷ ಸಂಹಾರ ನಿರ್ದೋಷಗುಣಪೂರ್ಣನೆ
ಇನಕುಲಾಂಬುದಿಚಂದ್ರ ಘನಶುಭಗುಣಸಾಂದ್ರ
ಸನಕಾದಿ ಮುನಿವಂದ್ಯ ಪುರಂದರ ವಿಠಲ