ಎನ್ನ ಕಡೆಹಾಯಿಸುವುದು ನಿನ್ನ ಭಾರ ।
ನಿನ್ನ ಸ್ಮರಣೆ ಮಾಡುವುದು ಎನ್ನ ವ್ಯಾಪಾರ
ಎನ್ನ ಸತಿ ಸುತರಿಗೆ ನೀನೆ ಗತಿ ।
ನಿನ್ನವರು ಎಂಬುದೇ ಎನ್ನ ನೀತಿ
ಎನ್ನ ನಿತ್ಯ ಸಾಕುವುದು ನಿನ್ನ ಧರ್ಮ |
ನಿನ್ನ ಮರೆತು ಬದುಕುವುದು ಎನ್ನ ಕರ್ಮ
ಎನ್ನ ತಪ್ಪ ಎಣಿಸುವುದು ನಿನಗೆ ಸಲ್ಲ |
ನಿನ್ನ ಮರೆತು ತಿರುಗುವುದು ಎನ್ನದಲ್ಲ
ಎನಗೆ ಪಡಿಯಿಕ್ಕುವುದು ನಿನ್ನ ಮಾನ |
ನಿನ್ನ ಮರೆತು ತಿರುಗುವುದು ಎನ್ನ ಅಪಮಾನ
ನೀನಲ್ಲದೆ ಇನ್ನಾರಿಗೆ ಮೊರೆ ಇಡುವೆ ।
ಎನ್ನ ಪುರಂದರವಿಠಲ ನಿನಗೆ ಪೇಳುವೆ