ಕೀರ್ತನೆ - 234     
 
ಎಂದಪ್ಪಿಕೊಂಬೆ ರಂಗಯ್ಯ ನಿನ್ನ । ಎಂದಪ್ಪಿಕೊಂಬೆ ಎಂದಪ್ಪಿಕೊಂಬೆ ನಾನೆಂದು ಮುದ್ದಾಡುವೆ । ಎಂದಿಗೆ ಸವಿಮಾತನಾಡಿ ನಾ ದಣಿವೆನೊ ಅರಳೆಲೆಮಾಗಾಯಿ ಕೊರಳ ಪದಕ ಸರ | ತರಳರನೊಡಗೂಡಿ ಬೆಣ್ಣೆಯ ಮೆಲುವನ ಅಂದುಗೆ ಪಾಯ್ವಟ್ಟು ಗೆಜ್ಜೆ ಘಿಲುಘಿಲು ಕೆನೆ | ಚೆಂದದಿ ಕುಣಿವ ಮುಕುಂದನ ಚರಣವ ಹೊನ್ನಿನ ಉಡುದಾರ ರನ್ನದ ಚೌಕುಳಿ | ಚಿನ್ನದುಂಗುರವಿಟ್ಟ ಜಾಹ್ನವಿ ಜನಕನ ಅಪ್ಪಣ್ಣ ಭಾಗವತನ ರೂಪವು ತಾನಾಗಿ । ತುಪ್ಪದ ಬಿಂದಿಗೆ ತಂದ ವಿಠಲನ ಪರಿಪರಿ ಭಕುತರ ಮರೆಯದೆ ಸಲಹುವ | ಪುರಂದರವಿಠಲನ ಸಿರಿಪಾದಪದುಮವ