ಕೀರ್ತನೆ - 233     
 
ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ ಚಿಂತಾಯತನೆ ನಿನ್ನ ನಾಮ ಎನಗೊಂದು ಕೋಟಿ ಪವಿತ್ರೋದಕದಿ ಪಾದ ತೊಳೆವೆನೆಂತೆಂದರೆ | ಪಾವನೆಯಾದ ಗಂಗೆ ಪಾದೋದ್ಭವೆ ॥ ನವಕುಸುಮವ ಸಮರ್ಪಿಸುವೆನೆಂದರೆ ಉದು ಭವಿಸಿಹನು ಅಜ ನಿನ್ನ ಪೊಕ್ಕುಳ ಹೂವಿನಲಿ ದೀಪವನು ಬೆಳಗುವೆನೆ ನಿನ್ನ ಕಂಗಳು ಸಪ್ತ ದ್ವೀಪಂಗಳೆಲ್ಲವನು ಬೆಳೆಗುತಿಹವೋ ॥ ಆಪೋಶನವನಾದರೀವೆನೆಂತೆಂಬೆನೆ ಆಪೋಶನವಾಯ್ತು ಏಳು ಅಂಬುಧಿಯು ಕಾಣಿಕೆಯಿತ್ತಾದರೂ ಕೈ ಮುಗಿವೆನೆಂದರೆ ರಾಣಿವಾಸವು ಸಿರಿದೇವಿ ನಿನಗೆ || ಮಾಣದೆ ಮನದೊಳು ನಿನ್ನ ನಾಮಸ್ಮರಣೆ ಧ್ಯಾನವನು ದಯೆ ಮಾಡೋ ಪುರಂದರವಿಠಲ