ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ।
ಫುಲ್ಲನಾಭನೆ ನೀನಿದ್ದಲ್ಲಿ ಇರಿಸೆನ್ನ
ಮರಳಿ ಮರಳಿ ಜನ್ಮ ಮರಣವನೊಲ್ಲೆ |
ದುರಿತ ಕೋಟಲೆಯ ಸಂಸಾರವನೊಲ್ಲೆ ॥
ತುರುಕಾದು ಕೊಳಲನೂದುವ ಮುರಮರ್ದನ ।
ಚರಣಕಮಲಗಳ ಸ್ಮರಣೆಯೊಳಿರಿಸೆನ್ನ
ಬಂದು ಸಂಸಾರದ ಬೇನೆಯೊಳಗೆ ಬಿದ್ದು |
ನೊಂದೆನು ಕಡುಮೋಹದಿಂದ ನಾ ಬೆಂದು ||
ನಂದಗೋಪನ ಕಂದ ವೃಂದಾವನಪ್ರಿಯ |
ಎಂದೆಂದು ತವಪಾದ ಸ್ಮರಣೆಯೊಳಿರಿಸೆನ್ನ
ಪುತ್ರ-ಪೌತ್ರರು ಬಂಧು-ಮಿತ್ರ ಬಾಂಧವರೆಂದು |
ಕತ್ತಲೆಯೊಳು ಕಡುನೊಂದೆನಯ್ಯ ||
ಸತ್ಯಮೂರುತಿ ಶ್ರೀ ಉಡುಪಿಯ ಶ್ರೀ ಕೃಷ್ಣ ।
ಭಕ್ತವತ್ಸಲ ಶ್ರೀ ಪುರಂದರವಿಠಲ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಆತ್ಮ ನಿವೇದನೆ