ಕೀರ್ತನೆ - 222     
 
ಆರು ಬದುಕಿದರಯ್ಯ ಹರಿ ನಿನ್ನ ನಂಬಿ ತೋರೋ ಈ ಜಗದೊಳಗೆ ಒಬ್ಬರನು ಕಾಣೆ ಕಲಹಬಾರದ ಹಾಗೆ ಕರ್ಣನನು ನೀ ಕೊಂದೆ ಸುಲಭದಲಿ ಕೌರವರ ಮನೆಯ ಮುರಿದೆ || ನೆಲನ ಬೇಡಲು ಪೋಗಿ ಬಲಿಯ ತಲೆಯನು ತುಳಿದೆ ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ ಕರಪತ್ರದಿಂದ ತಾಮ್ರಧ್ವಜನ ತಂದೆಯನು ಕೊರಳ ಕೊಯಿಸಿದೆ ನೀನು ಕುಂದಿಲ್ಲದೆ ॥ ಮರುಳನಂದದಿ ಪೋಗಿ ಭ್ರಗುಮುನಿಯ ಕಣ್ಣೊಡೆದೆ ಅರಿತು ನರಕಾಸುರನ ಹೆಂಡಿರನು ಬೆರೆದೆ ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ ಗರುಡವಾಹನ ನಿನ್ನ ಚರಿಯವರಿಯೆ | ದೊರೆ ಪುರಂದರ ವಿಠಲ ನಿನ್ನನ್ನು ನಂಬಿದರೆ ತಿರುಪೆಯೂ ಹುಟ್ಟಲೊಲ್ಲದು ಕೇಳೊ ಹರಿಯೆ