ಕೀರ್ತನೆ - 218     
 
ಅಪಮಾನವಾದರೆ ಒಳಿತು | ಅಪರೂಪ ಹರಿನಾಮ ಜಪಿಸುವ ಮನುಜಗೆ ಮಾನದಿಂದಲಿ ಅಭಿಮಾನ ಪುಟ್ಟವುದು । ಮಾನದಿಂದಲಿ ತಪ ಹಾನಿಯಾಗುವುದು || ಮಾನಿ ಕೌರವನಿಗೆ ಹಾನಿಯಾಯಿತು ಅನು-| ಮಾನವಿಲ್ಲವು ಮಾನ ಅಪಮಾನ ಸಮರಿಗೆ ಅಪಮಾನದಿಂದಲಿ ತಪವೃದ್ಧಿಯಾಹುದು । ಅಪಮಾನದಿಂ ಪುಣ್ಯ ಸಫಲವಾಗುವುದು ॥ ಅಪಮಾನದಿಂದಲಿ ನೃಪ ಧ್ರುವರಾಯಗೆ । ಕಪಟನಾಟಕ ಕೃಷ್ಣ ಅಪರೋಕ್ಷನಾದನು ನಾನೇನ ಮಾಡಲಿ ಆರಲ್ಲಿ ಪೋಗಲಿ | ಕಾನನಚರರಾರಾಧ್ಯ ನೀನಿರಲು || ದೀನರಕ್ಷಕ ನಮ್ಮ ಪುರಂದರವಿಠಲನೆ | ಏನು ಬೇಡೆನಗಪಮಾನವೆ ಇರಲಿ