ತುಂಗೆ ಮಂಗಳತರಂಗೆ ಹರಿಸರ್ವಾಂಗೇ ।
ಜಯಜಯ ಜಯತು ತುಂಗೆ
ಆದಿಯಲೊಬ್ಬ ದೈತ್ಯ ಮೇದಿನಿಯಕದ್ದೊಯ್ದು ।
ಸಾಧಿಸಿ ರಸಾತಳದಲ್ಲಿರಿಸೆ |
ಭೇದಿಸಿದವನ ನಾಸಿಕದಲ್ಲಿ ಪುಟ್ಟಿದೆ ।
ಆದಿವರಾಹನ ದಾಡೆಯಲಿ ಬಂದೆ ದೇವಿ
ಜಲವೆಲ್ಲ ಹರಿಮಯ, ಶಿಲೆಯೆಲ್ಲ ಶಿವಮಯ |
ಮಳಲುಮಿಟ್ಟಿಗಳೆಲ್ಲ ಮುನಿಮಯವು |
ಬೆಳೆದ ದರ್ಭೆಗಳು ಸಾಕ್ಷಾತು ಬ್ರಹ್ಮಮಯ ।
ನಳಿನನಾಳವು ಸರ್ವ ವಿಷ್ಣುಮಯ
ಇದೆ ವೃಂದಾವನ, ಇದೆ ಕ್ಷೀರಾಂಬುಧಿ ।
ಇದೆ ವೈಕುಂಠಕೆ ಸರಿಮಿಗಿಲೆನಿಸಿದೆ ॥
ಇದೆ ಬದರಿಕಾಶ್ರಮ, ಇದೆ ವಾರಣಾಸಿಗೆ,
ಅಧಿಕವೆಂದೆನಿಸಿದೆ ದೇವಿ ತುಂಗೆ
ಧರೆಗೆ ದಕ್ಷಿಣವಾರಣಾಸಿಯೆಂದೆನಿಸಿದೆ ।
ಪರಮ ಪವಿತ್ರ ಪಾವನ ಚರಿತ್ರೆಯು ನಿನ್ನ ||
ಸ್ಮರಣೆಮಾತ್ರದಿ ಕೋಟಿ ಜನ್ಮದಘವನಳಿವ ।
ಪರಮ ಸಾಯುಜ್ಯದ ಫಲವೀವ ದೇವಿ
ಪರಮಭಕ್ತ ಪ್ರಹ್ಲಾದಗೊಲಿದು ಬಂದ|
ಪರಮ ನರಸಿಂಹಕ್ಷೇತ್ರವೆಂದೆನಿಸಿ ಮೆರೆದ ||
ಧರೆಯೊಳಧಿಕವಾದ ಕೂಡಲಿ ಪುರದಲಿ !
ವರದ ಪುರಂದರ ವಿಠಲನಿರಲು ಬಂದೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ನದಿ ದೇವತೆಗಳು