ಕೀರ್ತನೆ - 209     
 
ಕಂಡೆ ಕರುಣನಿಧಿಯ | ಗಂಗೆಯ | ಮಂಡೆಯೊಳಿಟ್ಟ ದೊರೆಯ | ರುಂಡಮಾಲೆ ಸಿರಿಯ | ನೊಸಲೊಳು | ಕೆಂಡಗಣ್ಣಿನ ಬಗೆಯ 1 ಹರನ ಗಜಚರ‍್ಮಾಂಬರನ । ಗೌರೀ | ವರ ಜಗದೀಶ್ವರನ । ತ್ರಿಜಗನ್ಮೋಹಕನ | ತ್ರಿಲೋಚನ | ಭುಜಗ ಕುಂಡಲಧರನ | ಹರನ ಭಸಿತ ಭೂಷಿತ ಶಿವನ । ಭಕ್ತರ । ವಶದೊಳಗಿರುತಿಹನ | ಪಶುಪತಿಯೆನಿಸುವನ | ಧರೆಯೊಳು | ಶಶಿಶೇಖರ ಶಿವನ |ಹರನ ಕಪ್ಪುಗೊರಳ ಹರನ | ಕಂ | ದರ್ಪಪಿತನ ಸಖನ | ಮುಪ್ಪುರ ಗೆಲಿದವನ | ಮುನಿನುತ | ಸರ್ಪಭೂಷಣ ಶಿವನ |ಹರನ ಕಾಮಿತ ಫಲವೀವನ | ಭಕುತರ । ಪ್ರೇಮದಿಂ ಸಲಹುವನ । ರಾಮನಾಮಸ್ಮರನ ರತಿಪತಿ| ಕಾಮನ ಗೆಲಿದವನ | ಶಿವನ ಧರೆಗೆ ದಕ್ಷಿಣ ಕಾಶೀ | ಎಂದೆನಿಸುವ । ವರ ಪಂಪಾವಾಸಿ ತಾರಕ ಉಪದೇಶಿ । ಪುರಂದರ ವಿಠಲ ಭಕ್ತರ ಪೋಷೀ । ಹರನ