ಕೀರ್ತನೆ - 203     
 
ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ವಾಗಭಿಮಾನಿ ವರಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ ಜಗದೊಳು ನಿಮ್ಮ ಪೊಗಳುವೆನಮ್ಮ ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ಪಾಡುವೆ ಶ್ರುತಿಯ ಬೇಡುವೆ ಮತಿಯ ಪುರಂದರ ವಿಠಲನ ಸೋದರ ಸೊಸೆಯೆ