ನಲಿದಾಡೆ ಎನ್ನ ನಾಲಿಗೆ ಮೇಲೆ – ಸರಸ್ವತಿ ದೇವಿ
ಕುಣಿದಾಡೆ ಎನ್ನ ನಾಲಿಗೆ ಮೇಲೆ
ಸಲಿಲಜೋದ್ಬವನ ವದನ ನಿಲಯಳೇ
ಇಳೆಯೊಳಪ್ರತಿಮ ಗುಣಾಂಬುಧಿ ತಾಯೆ
ಘಿಲುಘಿಲು ಘಿಲ್ಲು ಗೆಜ್ಜೆಯ ನಾದ ಭಳಿ ಭಳಿರೆಂಬಂದುಗೆ
ಹೊಳೆವ ಬೆರಳುಂಗುರ ಕಿಣಿಕಿಣಿನಾದ |ಎಳೆಯ ಮಾವಿನ |
ತಳಿರ ಪೋಲುವ ದಿವ್ಯ ಪಾದ |ಚೆಲ್ವಪೆಂಡೆಯ ಭೇದ||
ನಲಿವ ಯುಗಳ ಜಂಘೆ |ಜಲಗುಳ್ಳೆಯಂತೆ ಜಾನು |
ಥಳಥಳಿಸುವ ತೊಡೆ ಹೊಳೆವ ಸುಗುಣಿಯೆ
ದಿನಕರ ಕೋಟಿ ತೇಜದಿ ಹೊಳೆವ ಅನುಪಮವಾದ |
ಕನಕವಸನದಿಂದಲಿ ಎಸೆವ । ಘನವಾದ ಜಘನ ಗ-
ಗನದಂದದಿ ಕಟಿಯಲ್ಲಿ ಮೆರೆವ ಮಣಿದಾಮವಿಭವ ||
ತನು ಜಠರವು ಜಾಹ್ನವಿ ಸುಳಿನಾಭಿಯು
ಘನಸ್ತನಯುಗಳ ಚೆಂದನಲೇಪಿತಳೆ
ದುಂಡುಮುತ್ತಿನ ಕೊರಳ ಹಾರ | ಉದ್ದಂಡಮಣಿ ಪ್ರ-1
ಚಂಡ ಮಿಣಿಮಿಣಿಸುವ ಹೊನ್ನಿನ ಹಾರ ಕರಿರಾಜಪೋತನ 1
ಸೊಂಡಿಲಿನಂತೆ ಭುಜದ ಭಾರ ನಡೆವ ಒಯ್ಯಾರ ||
ಮಂಡಿತವಾದ ಕಂಕಣ ತೋಳ್ಬಳೆಗಳು |
ದುಂಡು ಹವಳ ಕೈಕಟ್ಟುಳ್ಳವಳೆ
ನಸುನಗು ಮುಖವು ನಾಸಾಭರಣ | ಎಸೆವ ಕಪೋಲ ।
ಹೊಸ ಕುಂಡಲ ಚಳತುಂಬುಳ್ಳ ಶ್ರವಣ | ಬಿಸಜದಳದಂತೆ 1
ಶಶಿ ಸೂರ್ಯರ ಆಭರಣ ಸುಶೋಭಿತೆ |
ಎಸೆವ ಕರ್ಣಾಂತವಾದ ನಯನ | ತಿಲಕದ ಹಸನ |
ಕುಸುಮ ಮುಡಿದ ಮೂರ್ಧಜವುಳ್ಳವಳೇ
ಸಿಂಗಾರದ ಜಡೆಬಂಗಾರ | ಹೊಂಗೇದಗೆ ಮುಡಿದ |
ಬಂಗಾರದ ಹೆರಳಿನ ರಾಗುಟಿ ವರ । ಭೃಂಗದ ಸ್ವರ |
ಹಿಂಗದೆ ಭಕ್ತರ ಸಲಹುವ ಭಾರ | ಕಂಗಳ ಮನೋಹರ
ರಂಗ ಪುರಂದರ ವಿಠಲರಾಯನ |
ಮಂಗಳ ಮೂರ್ತಿಯ ತೋರೆ ಶುಭಾಂಗಿ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಸರಸ್ವತಿ