ಕೀರ್ತನೆ - 200     
 
ಕೊಡು ಬೇಗ ದಿವ್ಯ ಮತಿ -ಸರಸ್ವತಿ ಕೊಡು ಬೇಗ ದಿವ್ಯಮತಿ ಮೃಡಹರಿಹಯಮುಖರೊಡೆಯಳೆ ನಿನ್ನಯ | ಅಡಿಗಳಿಗೆರಗುವೆ ಅಮ್ಮ ಬ್ರಹ್ಮನ ರಾಣಿ ಇಂದಿರಾರಮಣನ ಹಿರಿಯ ಸೊಸೆಯು ನೀನು | ಬಂದೆನ್ನ ವದನದಿ ನಿಂದು ನಾಮವ ನುಡಿಸಿ ಅಖಿಳ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ । ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ ಪತಿತ ಪಾವನೆಯೆ ನೀ ಗತಿಯೆಂದು ನಂಬಿದೆ | ವಿತತ ಪುರಂದರ ವಿಠಲನ ತೋರೆ