ಹರಿಗೆ ಸರಿ ಮಿಗಿಲೆನಿಪರಿಲ್ಲ ದೈವಂಗಳೊಳು |
ಗುರು ಮಧ್ವರಾಯರಿಗೆ ಸರಿಯಿಲ್ಲ ರಾಯರೊಳು |
ಪರಮವೈಷ್ಣವರಿಗೆಣೆಯಿಲ್ಲ ಲೋಕದೊಳೆಂದು
ಬಿಡದೆ ಡಂಗುರವ ಹೊಯಿಸಿ ॥
ಬಿರುದ ಪಸರಿಸಿ ಢಕ್ಕೆಯವ ನುಡಿಸಿ ಎನ್ನುತಲಿ |
ಶರಣು ಹೊಕ್ಕರ ಪಣೆಯ ದುರ್ಲೇಖಮಂ ತೊಡೆದು |
ಬರೆದು ವೈಷ್ಣವಲಿಪಿಯ ಶುದ್ಧಾತ್ಮರಂ
ಮಾಳ್ವ ಗುರುರಾಯರನು ಭಜಿಸಿರೈ
ಭುವನ ಪಾವನರಪ್ಪ ಪೂರ್ಣಪ್ರಜ್ಞರ ಸ್ತೋತ್ರ |
ನವರತ್ನಮಾಲೆಯಿದು ಶ್ರೀ ವಿಷ್ಣುದಾಸರಿಗೆ |
ಶ್ರವಣಮಂಗಳವಪ್ಪ ತತ್ತ್ವಾಮೃತದ ಸಾರ
ಜನ್ಮ ಮೂಲೋತ್ಪಾಟನ ॥
ಜವನ ಗಂಟಲನೊಡೆದು ತನ್ನ ನಿಜದಾಸರಿಗೆ !
ಧ್ರುವವಾಗಿ ಪರಮಪದವಿಯನಿತ್ತು ರಕ್ಷಿಸುವ ।
ಪವನನಂತರ್ಯಾಮಿ ಪುರಂದರ ವಿಠಲನ
ತವಕದಿಂದಲಿ ಭಜಿಸಿರೈ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಹನುಮ-ಭೀಮ-ಮಧ್ವರು