ಹನುಮನ ಮತವೆ ಹರಿಯ ಮತವು |
ಹರಿಯ ಮತವೇ ಹನುಮನ ಮತವು
ಹನುಮನು ಒಲಿದರೆ ಹರಿ ತಾನೊಲಿವನು |
ಹನುಮನು ಮುನಿದರೆ ಹರಿಮುನಿವ
ಹನುಮನ ನಂಬಿದ ಸುಗ್ರೀವ ಗೆದ್ದ |
ಹನುಮನ ನಂಬದ ವಾಲಿಯು ಬಿದ್ದ
ಹನುಮನು ಒಲಿದ ವಿಭೀಷಣ ಗೆದ್ದ
ಹನುಮನು ಮುನಿಯಲು ರಾವಣ ಬಿದ್ದ
ಹನುಮನು ಪುರಂದರ ವಿಠಲನ ದಾಸ।
ಹನುಮನೊಳ್ ಪುರಂದರ ವಿಠಲನಾವಾಸ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಹನುಮ-ಭೀಮ-ಮಧ್ವರು