ಹನುಮಂತ ನೀ ಬಲು ಜಯವಂತನಯ್ಯ |
ಅನುಮಾನವಿಲ್ಲ ಆನಂದತೀರ್ಥರಾಯ
ರಾಮಸೇವಕನಾಗಿ ರಾವಣನ ಪುರವ ನಿರ್
ಧೂಮವ ಮಾಡಿದೆ ನಿಮಿಷದೊಳಗೆ ॥
ಭೂಮಿಯ ಪುತ್ರಿಗೆ ಮುದ್ರೆಯುಂಗುರವಿತ್ತು ।
ಕ್ಷೇಮ ಕುಶಲವ ಶ್ರೀರಾಮ ಪಾದಕರ್ಪಿಸಿದೆ
ಕೃಷ್ಣಾವತಾರದಿ ಭೀಮನಾಗಿ ಬಂದು
ದುಷ್ಟ ದೈತ್ಯರನೆಲ್ಲ ಸಂಹರಿಸಿದೆ |
ದೃಷ್ಟಿಹೀನ ಧೃತರಾಷ್ಟ್ರನ ವಂಶವನು
ಕಷ್ಟವಿಲ್ಲದೆ ಕೊಂದು ಶ್ರೀಕೃಷ್ಣಪಾದಕರ್ಪಿಸಿದೆ
ಪತಿತ ಸಂಕರ ಹುಟ್ಟಿ ಮತವೆಲ್ಲ ಕೆಡಿಸಲು
ಮತಿ ಹೀನರಾದ ಸಜ್ಜನರಿಗೆಲ್ಲ ||
ಅತಿ ಬೇಗದಲಿ ಮಧ್ವಯತಿ ರೂಪ ಧರಿಸಿ ಸದ್
ಗತಿ ಪಾಲಿಸಿದೆ ಪುರಂದರ ವಿಠಲನ ದಾಸ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಹನುಮ-ಭೀಮ-ಮಧ್ವರು