ಕೀರ್ತನೆ - 194     
 
ಹನುಮಂತ ದೇವ ನಮೋ ವನಧಿಯನು ದಾಟಿ ರಾವಣನ ದಂಡಿಸಿದೆ ಅಂಜನೆಯ ಆತ್ಮದಿಂದುದಿಸಿ ನೀ ಮೆರೆದೆಯೋ ಕಂಜಸಖಮಂಡಲಕೆ ಕೈ ದುಡುಕಿದೆ || ಭುಂಜಿಸೀರೇಳು ಜಗಂಗಳನು ಉಳುಹಿದೆ ಪ್ರ- ಭಂಜನಾತ್ಮಜ ಗುರುವೆ ಸರಿಗಾಣೆ ನಿನಗೆ ಹೇಮ ಕುಂಡಲ ಹೇಮ ಯಜ್ಞೋವೀತಖಿಳ ಹೇಮಕಟಿಸೂತ್ರ ಕೌಪೀನಧಾರೀ || ರೋಮಕೋಟಿಲಿಂಗ ಸತ್ವಶ್ಯಾಮಲ ವರ್ಣ ರಾಮಭೃತ್ಯನೆ ನಿನಗೆ ಸರಿಗಾಣೆ ಗುರುವೆ ರಾಮ-ಲಕ್ಷ್ಮಣರ ಕಂಡಾಳಾಗಿ ನೀ ಮೆರೆದೆ । ಭೂಮಿಜೆಗೆ ಮುದ್ರೆಯುಂಗುರವನಿತ್ತೆ | ಆ ಮಹಾ ಲಂಕಾ ನಗರವೆಲ್ಲವನು ಸುಟ್ಟು ಧೂಮ ಧಾಮವ ಮಾಡಿ ಆಳಿದೆಯೊ ಮಹಾತ್ಮ ಅಕ್ಷಯ ಕುಮಾರಕನ ನಿಟ್ಟೊರಸಿ ಬಿಸುಟು ನೀ ರಾಕ್ಷಸಾಧಿಪ ರಾವಣನು ರಣದಲಿ || ವಕ್ಷಸ್ಥಳದಲ್ಲಿ ಶಿಕ್ಷಿಸಲು ಮೂರ್ಛಿಯ ಬಗೆಯ ರಕ್ಷಿಸಿದೆ, ರಕ್ಷಿಸಿದೆ ರಾಯ ಬಲವಂತ ಶ್ರೀಮದಾಚಾರ‍್ಯ ಕುಲದವನೆಂದೆನಿಸಿದೆಯೈ ಶ್ರೀ ಮಹಾಲಕುಮಿ ನಾರಾಯಣಾಖ್ಯ ॥ ಶ್ರೀ ಮನೋಹರ ಪುರಂದರ ವಿಠಲ ರಾಯನ ಸೌಮ್ಯಮನದಾಳು ಹನುಮಂತ ಬಲವಂತ