ಕೀರ್ತನೆ - 193     
 
ಹನುಮ ನಮ್ಮ ತಾಯಿತಂದೆ-ಭೀಮ ನಮ್ಮ ಬಂಧು ಬಳಗ | ಆನಂದ ತೀರ್ಥರೆಮಗೆ ಗತಿಗೋತ್ರವಯ್ಯ ತಾಯಿ ತಂದೆ ಹಸುಳೆಗಾಗಿ ಸಾಯ ಮಾಡಿ ಸಾಕುವಂತೆ ಆಯಾಸವಿಲ್ಲದೆ ಸಂಜೀವನ ತಂದೆ | ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆದೆ ರಘು ರಾಯನಂಘ್ರಿಗಳೆ ಸಾಕ್ಷಿ ತ್ರೇತಾಯುಗದಲ್ಲಿ ಬಂಧು ಬಳಗದಂತೆ ಆಪದ್ಬಂಧುವಾಗಿ ಪಾರ್ಥನಿಗೆ ಬಂದ ದುರಿತಂಗಳ ಪರಿಹರಿಸಿ | ಅಂಧಕಜಾತರ ಕೊಂದು ನಂದನಂದನಿಗರ್ಪಿಸಿದ ಗೋ- ವಿಂದನಂಫ್ರಿಗಳೆ ಸಾಕ್ಷಿ ದ್ವಾಪರಯುಗದೆ ಗತಿಗೋತ್ರರಂತೆ ಸಾಧುಮತಿಗಳಿಂಗೆ ಗತಿಯನಿತ್ತು ಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ | ಮತಗೆಟ್ಟ ವೈಷ್ಣವರಿಗೆ ಗತಿಯ ತೋರಿದೆ ಪರಮಾತ್ಮ ಗತಿ ಪುರಂದರ ವಿಠಲ ಸಾಕ್ಷಿ ಕಲಿಯುಗದಲ್ಲಿ