ಕೀರ್ತನೆ - 191     
 
ಸ್ವಾಮಿ ಮುಖ್ಯಪ್ರಾಣ ನೀ ಮಲೆವರ ಗಂಟಲಗಾಣ ಸಕಲವಿದ್ಯಾಪ್ರವೀಣ ನೀ ಹಿಡಿದೆಯೋ ರಾಮರ ಚರಣ ಏಕಾದಶೀಯ ರುದ್ರ ನೀ ಹಿಡಿದೆಯೊ ರಾಮರ ಮುದ್ರಾ ಸೇತುವೆಗಟ್ಟಿ ಸಮುದ್ರ ನೀ ಹಾರಿದೆಯೋ ಬಲಭದ್ರ ಸಂಜೀವಿನಿ ಪರ‍್ವತವನ್ನು ಅಂಜದೆ ತಂದೆಯೊ ನೀನು | ಅಂಜನೆ ತನುಸಂಭವನು ನಿನ್ನ ಬೇಡಿಕೊಂಬೆನೋ ನಾನು ವೈಕುಂಠಸ್ಥಳದಿಂದ ಬಂದು–ಪಂಪಾಕ್ಷೇತ್ರದಿ ನಿಂದು । ಯಂತ್ರೋದ್ಧಾರಕನೆಂದು-ಪುರಂದರ ವಿಠಲನೆ ಸಲಹೆಂದು