ಕೀರ್ತನೆ - 189     
 
ಶ್ರೀ ಮಧ್ವರಾಯರ ಸೇವೆ ದೊರಕುವುದು ಜನುಮ ಸಫಲ ಕಾಣಿರೋ ಶ್ರೀಮದಾನಂದತೀರ್ಥರ ಪಾದವ ನೆನೆವರು ಸಾಮಾನ್ಯ ಸುರರು ಕಾಣಿ-ಬೊಮ್ಮನ ಆಣಿ ಜಗತು ಸತ್ಯವು ಅಲ್ಲ ಜಡ-ಜೀವ ಭೇದವಲ್ಲ ಅಗುಣನು ಪರಬೊಮ್ಮನು-|| ಹೀಗೆ ನುಡಿವ ಜನರ ನಿಗಮಶಾಸ್ತ್ರದಿ ಗೆದ್ದು ಜಗ ಸತ್ಯ ಸಗುಣ ಬ್ರಹ್ಮ ಎಂದು ಪೇಳುವ ಹರಿ ಸರ್ವೋತ್ತಮ ನಿತ್ಯ ತರುವಾಯ ರಮಾದೇವಿ ತರುವಾಯ ವಿಧಿಪ್ರಾಣರು ಸರಸ್ವತಿ ಭಾರತಿ ಗರುಡ ಆನಂತ ರುದ್ರ ತರುವಾಯ ಆರು ದೇವಿಗಳು ಸೌಪರ್ಣಿ ವಾರುಣಿದೇವಿ ಅಪರ್ಣಾದೇವಿಯರು ಸಮರು ದ್ವಿಪದಿ ಮನ್ವಾದಿಗಳು | ಈ ಪರಿ ತಾರತಮ್ಯ ಜಪ-ಧ್ಯಾನಾರ್ಚನೆಯಿಂದ ಅಪವರ್ಗದನ ಸೇವೆಯ ಮಾಡಿರೊ ಎಂಬ ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿ ಚೆಂದದಿಂದಲಿ ಲಾಲಿಸಿ ॥ ಇಂದಿರಾರಮಣ ಗೋವಿಂದನೇ ದೈವವೆಂದು । ಸಂದೇಹವಿಲ್ಲದೆ ಸಾಧಿಸಿ-ಮಾಯೀ ಸೋಲಿಸಿ ಹಿಮಗಿರಿಯಿಂದ ಸೇತುವೆಯ ಪರ್ಯಂತರ ಭ್ರಮಿಸುತ ಸುಜನರಿಗೆ || ಕ್ರಮತತ್ತ್ವ ಬೋಧಿಸಿ ಕಮಲನಾಭನ ಮೂರ್ತಿ ಕ್ರಮವರಿತು ಸ್ಥಾಪಿಸಿ ಪೂಜಿಸಿರೆಂದ ಭೂತಳದೊಳು ರೌಪ್ಯಪುರದಿ ನೆಲಸಿ ಗೆದ್ದು ಧಾತ್ರೀ ಮುದ್ರೆಯ ತೋರಿಸಿ | ಈತನೇ ಹನುಮಂತ ಈತನೇ ಭೀಮಸೇನ ಈತನೇ ಭವಿಷ್ಯದ ಬ್ರಹ್ಮ ಜೀವೋತ್ತಮ ಶ್ರೀಮದನಂತನೆ ಅನಂತಕಾಲಕೆಯೆಂದು ಯಮಕ ಭಾರತ ತೋರಿಸಿ ಸ್ವಾಮಿ ಸರ‍್ವಾಂರ್ಯಾಮಿ । ಸರ್ವಗುಣಪೂರ್ಣನೆಂದು ಪ್ರೇಮಿ ಪುರಂದರ ವಿಠಲನ ದಾಸನಾದ