ಕೀರ್ತನೆ - 188     
 
ಶ್ರೀ ತತ್ತ್ವವಾದ ಮತವ ಶ್ರೀ ತತ್ತ್ವವಾದ ಮತವಾರ್ಧಿ ಶುಭಚಂದ್ರಮನ | ಭೂತಲದೊಳಪ್ರತಿಮನೆನಿಪ ಶ್ರೀ ಯತಿವರನ । ಪ್ರೀತಿಯಿಂ ಭಜಿಸೆ ಇಷ್ಟಾರ್ಥಗಳ ಸಲಿಸುವವಾತಜಾತನ ಸ್ಮರಿಸಿರೈ ಶ್ರೀಮಾರುತನು ತ್ರೇತೆಯಲಿ ಹನುಮನೆಂದೆನಿಸಿ | ತಾ ಮುದದಿ ಅಂಜನಾದೇವಿ ಗರ್ಭದಿ ಜನಿಸಿ । ರಾಮಪಾದಾಂಬುರುಹ ಭಜಿಸಿ ಸದ್ಭಕ್ತಿಯಲಿ ಸ್ವಾಮಿಯಾಜ್ಞೆಯನೆ ಕೊಂಡು । ನೇಮದಿಂ ಸಾಗರವ ದಾಟಿ ಲಂಕೆಯ ಪೊಕ್ಕು । ಪ್ರೇಮದಿಂದೊಯ್ದು ಮುದ್ರೆಯ ಜಾನಕಿಗೆ ಕೊಟ್ಟು | ಆ ಮಹದ್ವನದ ದನುಜರನೆಲ್ಲವಳಿದ ನಿಸ್ಸೀಮ ಹನುಮನ ಭಜಿಸಿರೈ ದ್ವಾಪರದಿ ಮಾರುತನು ಕುಂತಿದಾರಕನೆನಿಸಿ | ದ್ವಾಪರನ ಯುಕ್ತಿಯಿಂದುತ್ಕೃಷ್ಟರಾಗಿದ್ದ | ಪಾಪಿಗಳನಳಿದು ಕೀಚಕ ಜರಾಸಂಧಾದಿ ಭೂಪಾಲಕರನು ತರಿದು || ದ್ರೌಪದಿಗೆ ಸೌಗಂಧಿ ಕುಸುಮವನು ತರಪೋಗ - ಲಾಪಥದೊಳಸುರ ಮಣಿಮಂತ ಕದನವ ಮಾಡೆ! ಕೋಪದಿಂದವನ ಮರ್ದಿಸಿದನತಿ ಬಲವಂತನಾ ಪುರುಷನಂ ಭಜಿಸಿರೈ ಕಲಿಯುಗವು ಪ್ರಾಪ್ತವಾಗಲು ಮಧ್ವನಾಮದಿಂ ದಿಳೆಯೊಳವತರಿಸಿ ಸೋಹಂ ಎಂಬ ಶಂಕರನ ಹುಲುಮತಂಗಳ ಜರಿದು ಮಾಯಿಗಳ ಗೆಲಿದು ಮೋಹನ ಶಾಸ್ತ್ರಬಲೆಯನರಿದು ಮಥಿತ ದರುಶನವೈದ ನುಂಗಿ ಜೀರ್ಣಿಸಿಕೊಂಡು ಪ್ರಲಯ ಭೈರವನೆಂಬ ಬಿರುದ ಅವನಿಯ ಮೇಲೆ ನೆಲೆಗೊಳಿಸಿ ವಿಷ್ಣು ಪರದೈವವೆಂದರುಹಿದಾ ಅಲವಬೋಧರ ಭಜಿಸಿರೈ ಪ್ರತಿವಾದಿಗಿದಿರಾಗಿ ತಲೆಯೆತ್ತದಂತೆ ಸಂ- ತತ ಧರೆಯೊಳದ್ವೈತವಂಕುರಿಸದಂತೆ ದು- ರ್ಮತದ ಮೋಹನಶಾಸ್ತ್ರ ಪಲ್ಲವಿಸದಂತೆ ಮಾಯಿಗಳ ಮತಗಳ ಮತ ಹೆಚ್ಚದಂತೆ | ಕ್ಷಿತಿಯೊಳಗೆ ಶ್ರೀತತ್ತ್ವವಾದ ನೆಲಸಿಪ್ಪಂತೆ । ಶ್ರುತಿಶಾಸ್ತ್ರವದ್ವೈತವಂ ಬಿಟ್ಟು ಸೆಳೆವಂತೆ ಪ್ರತಿಪಾದಿಸುವ ಖಳರ ದುರ್ಭಾಷ್ಯಗಳ ಜರಿದ ಯತಿರಾಯರ ಭಜಿಸಿರೈ ಪರಮವೈಷ್ಣವರ ಮಿಂಚಿಡುವ ರತ್ನದ ಸಾಣೆ | ಪರವಾದಿಗಳ ಬೆನ್ನ ಮುರಿವ ವಜ್ರದ ಸಾಣೆ 1 ಗುರುಮಧ್ವಮುನಿಯ ಬಲುವಿದ್ಯೆ ಸಾಮರ್ಥ್ಯಕ್ಕೆ ಸರಿಗಾಣೆ ಲೋಕದೊಳಗೆ || ಧರೆಯೊಳಗೆ ಶ್ರೀತತ್ತ್ವವಾಗಿ ನೆಲಸಿಹ ವೀಣೆ । ಚರಿಸದಂತಿಳೆಯಲತಕಿಕ್ಕಿದ ಆಣೆ । ವರಮೂರ್ತಿ ಚೈತನ್ಯ ವಂದ್ಯ ಸುತ್ರಾಮನೇ । ಪೂರ್ಣಪ್ರಜ್ಞರ ಭಜಿಸಿರೈ ಅಕಳಂಕ ಚರಿತನೆ ಮುಮುಕ್ಷ ಮಸ್ತಕದ ಮಣಿ | ನಿಖಿಳ ಪೌರಾಣಶ್ರುತಿ ಶಾಸ್ತ್ರದಾಗಮದ ಖಣಿ । ಸಕಲವಾದಿಗಳ ಜಿಹ್ವೆಯಲ್ಲಿ ಮೆಟ್ಟಿದ ಆಣಿ ಭಾಗವತ ಚಿಂತಾಮಣಿ ॥ ಯುಕುತಿ ಪರಿಪೂರ್ಣಯತ್ನಾಶ್ರಮಕೆ ಕಟ್ಟಾಣಿ | ಪ್ರಕಟ ಕವಿಜನ ಕಮಲವ್ಯೂಹಕೆ ಗಗನಮಣಿ | ಸಕಲ ಜಗವಂದ್ಯ ಚೈತನ್ಯ ಚಿಂತಾಮಣಿ ಮುಖ್ಯಪ್ರಾಣರ ಭಜಿಸಿರೈ ಮುಂದೆ ಅಜನಾಗಿ ಪವಮಾನ ಕೃತಯುಗದಲ್ಲಿ | ಒಂದು ನಿಮಿಷದಲಿ ಸೃಜಿಸುವನು ಸಚರಾಚರವ । ಸಂದೇಹವಿಲ್ಲ ತಪ್ಪದು ವೇದವಾಕ್ಯವಿದು ಹಿಂದೆ ಶ್ರೀಹರಿಸೇವೆಯ ॥ ಒಂದು ಬಯಸದಲೆ ನಿಚ್ಚಟದ ಭಕ್ತಿಯಲಿ ತಾ - ನಂದು ಮಾಡಿದ ಸುಕೃತ ಫಲದಿಂದ ಬ್ರಹ್ಮತ್ವ । ಬಂದು ಯುಗ ಯುಗದೊಳವರಿತರಿಸಿ ದೃಷ್ಟವ ತೋರ‍್ವ ನಂದಮುನಿಪರ ಭಜಿಸಿರೈ