ಕೀರ್ತನೆ - 187     
 
ವೀರ ಹನುಮ ಬಹುಪರಾಕ್ರಮ ಸುಜ್ಞಾನವಿತ್ತು ಪಾಲಿಸಯ್ಯ ಜೀವರುತ್ತಮ ರಾಮದೂತನೆನಿಸಿಕೊಂಡಿ ನೀ ರಾಕ್ಷಸರ ವನವನೆಲ್ಲ ಜಯಿಸಿ ಬಂದೇ ನೀ ।। ಜಾನಕಿಗೆ ಉಂಗುರವಿತ್ತು ಜಗತಿಗೆಲ್ಲ ಹರುಷವಿತ್ತು ಜಾತಿಮಣಿಯ ರಾಮಗಿತ್ತು ಲೋಕದಿ ಪ್ರಖ್ಯಾತನಾದೆ ಗೋಪಿಸುತನ ಪಾದ ಪೂಜಿಸಿ ಗದೆಯ ಧರಿಸಿ ಕೌರವರ ಬಲವ ಸವರಿಸಿ ॥ ದ್ರೌಪದಿಯ ಮೊರೆಯ ಕೇಳಿ ಕರುಣದಿಂದ ತ್ವರದಿ ಬಂದು ಪಾಪಿ ಕೀಚಕನನು ಕೊಂದು ಭೀಮಸೇನನೆನಿಸಿಕೊಂಡೆ ಮಧ್ಯಗೇಹನಲಿ ಜನಿಸಿ ನೀ ಬಾಲ್ಯದಲ್ಲಿ ಮಸ್ಕರಿಯ ರೂಪಗೊಂಡೆ ನೀ || ಸತ್ಯವತಿಯ ಸುತನ ಭಜಿಸಿ | ಸಮ್ಮುಖದಲಿ ಭಾಷ್ಯ ಮಾಡಿ ಸಜ್ಜನರನು ಪಾಲಿಸಿದ ಪು ರಂದರವಿಠಲನ ದಾಸ