ವನಿತೆ ನೀ ತೋರಿಸಿ ಹನುಮನ ಬೇಗ ।
ತನು ಮನ ಧನವನು ನಿನಗೀವೆನೀಗ
ಆತುರದಿಂದಲಿ ಉದಧಿಹಾರಿದವನ |
ಪ್ರೀತಿಯಲಿ ರಾಮನ ಮುದ್ರೆಯಿತ್ತವನ ॥
ಘಾತಕರನ್ನು ಮುರಿದಟ್ಟಿದವನ ಸತಿ ।
ಸೀತೆಯ ಪತಿ ರಘುನಾಥಗರ್ಪಿಸಿದನ
ಪಾಂಡುನಂದನನಿಗೆ ಅನುಜನಾಗಿಹನ |
ಪುಂಡರೀಕಾಕ್ಷನ ಚರಣಸೇವಿಪನ ॥
ಪುಂಡ ಕೌರವಶಿರವ ಚೆಂಡನಾಡಿದವನ
ಎರಡು ಮೂರಾರೊಂದು ಕುಮತ ಖಂಡಿಸಿದನ ।
ಭರದಿ ಮಧ್ವಮತ ಉದ್ಧರಿಸಿದನ ।
ಧರೆಯೊಳಧಿಕ ಶ್ರೀಹರಿಯ ಭಜಕನ |
ವರದ ಶ್ರೀ ಪುರಂದರ ವಿಠಲರಾಯನ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಹನುಮ-ಭೀಮ-ಮಧ್ವರು