ರಾಯನ ನೋಡಿರೋ ಮಧ್ವ ರಾಯನ ಪಾಡಿರೊ
ಅಂಜನೆಯಲಿ ಹುಟ್ಟಿ ಅಂಬರಕಡರಿದ
ಹರಿಯೋ ಸಿಂಹದ ಮರಿಯೋ ।
ಕಂಜಾಕ್ಷಿಯ ಸುದ್ದಿಗೆ ಶರಧಿಯ ಲಂ
ಘಿಸಿದ ಪುರ ಸಂಧಿಸಿದ
ಅಂಜದೆ ವನವನು ಕಿತ್ತಿದ ಪುರವನು
ಸುಟ್ಟ ತಾ ಬಲು ದಿಟ್ಟಾ |
ಸಂಜೀವನ ಗಿರಿ ತಂದು ವಾನರರ
ಪೊರೆದಾ ರಾಮನ ಬೆರೆದಾ
ಕುಂತಿ ಕುಮಾರನು ಶೀಮೆಗೆ ಹರುಷದಿ
ಬೆಳೆದ ಖಳರನು ತುಳಿದ |
ಅಂತ ಕೌರವ ದುಶ್ಯಾಸನರಾ ಶಿರ
ತರಿದಾ ಚಲವನು ಮೆರೆದ |
ಸಂತಾಪವ ಪಡಿಸಿದ ಕುಜನಕೆ ಭೀಮ –
ನಾದ ಸನ್ನುತ ನಾದ |
ಕಂತುಜನಕ ಶ್ರೀಕೃಷ್ಣನ ಪಾದದಿ
ಬಿದ್ದ ಮದಗಜ ಗೆದ್ದ
ಮುನಿಕುಲದಲಿ ಉದಿಸಿದ ಗುರುಮಧ್ವ ತಾ
ನಾದ ಧರೆಯಲಿ ಮೆರೆದ |
ಅನಿಮಿಷರೊಡೆಯ ಶ್ರೀ ವೇದವ್ಯಾಸರ
ಚರಣ ಅನುದಿನ ಸ್ಮರಣ |
ಕನಸೊಳು ಕಾಣದ ಅದ್ವೈತಂಗಳ
ಮುರಿದ ತತ್ತ್ವ ತೋರಿದ |
ಘನಮಹಿಮ ಶ್ರೀ ಪುರಂದರ ವಿಠಲನ
ದಾಸ ಪಡೆದ ಸನ್ಯಾಸ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಹನುಮ-ಭೀಮ-ಮಧ್ವರು