ಕೀರ್ತನೆ - 181     
 
ಮಧ್ವರಾಯಾ-ಗುರು-ಮಧ್ವರಾಯಾ ಮಧ್ವರಾಯಾ-ಗುರು-ಮಧ್ವರಾಯಾ ರಾಮಾವತಾರದೊಳೊಮ್ಮೆ ಮಧ್ವರಾಯಾ ಆ ಮಹಾ ಹನುಮನಾದೆ ಮಧ್ವರಾಯಾ ॥ ವಾಮಮುಷ್ಟಿಲಿ ರಾವಣನ ಗೆಲಿದೆ ಮಧ್ವರಾಯಾ ॥ ಕಾಮಿತಾರ್ಥ ಸುರರಿಗಿತ್ತೆ ಮಧ್ವರಾಯಾ ಕೃಷ್ಣಾವತಾರದೊಳೊಮ್ಮೆ ಮಧ್ವರಾಯಾ ದುಷ್ಟಕುಲಕೆ ಭೀಮನಾದೆ ಮಧ್ವರಾಯಾ ॥ ಕುಟ್ಟಿದೆ ಕೌರವರನೆಲ್ಲ ಮಧ್ವರಾಯಾ - ಶ್ರೀ- ಕೃಷ್ಣನ ಪ್ರೀತಿಯ ಪಡೆದೆಯೊ ಮಧ್ವರಾಯಾ ಧರೆಯೊಳು ಯತಿಯಾಗಿ ಜನಿಸಿದೆ ಮಧ್ವರಾಯಾ ಗುರುವ್ಯಾಸರ ಹಿತವ ಪಡೆದೆ ಮಧ್ವರಾಯಾ ದುರುಳಮಾಯಿಮತವ ಮುರಿದೆ ಮಧ್ವರಾಯಾ ಪುರಂದರ ವಿಠಲನ ದಾಸನಾದೆ ಮಧ್ವರಾಯಾ