ಕೀರ್ತನೆ - 179     
 
ಪರಮ ಪದವಿಯ ನೀವ ಗುರುಮುಖ್ಯ ಪ್ರಾಣನ ಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ ಅಂದು ತ್ರೇತೆಯಲಿ ಹನುಮನಾಗಿ ಅವತರಿಸಿ ಬಂದು ದಾಶರಥಿಯ ಪಾದಕೆರಗಿ ॥ ಸಿಂಧುವನೆ ದಾಟಿ ಮುದ್ರಿಕೆಯಿತ್ತು ದಾನವರ ವೃಂದಪುರ ದಹಿಸಿ ಚೂಡಾಮಣಿಯ ತಂದವನ ದ್ವಾಪರಯುಗದಲಿ ಭೀಮಸೇನ ನೆನಿಸಿ ಶ್ರೀಪತಿಯ ಪಾದ ಕಡು ಭಜಕನಾಗಿ ಕೋಪಾವೇಶದಲಿ ದುಃಶಾಸನನನು ಸೀಳಿ ಭೂಪರ ಬಲದೊಳಗೆ ಜರೆಜರೆದು ಕರೆದವನ ಕಲಿಯುಗದಲಿ ತುರೀಯಾಶ್ರಮವನೆ ಧರಿಸಿ ಕಲುಷದ ಮಾಯಿಗಳನು ಸೋಲಿಸಿ ಖಿಲವಾದ ಮಧ್ವಮತವನೆ ನಿಲಿಸಿ ಪುರಂದರವಿಠಲನೆ ಪರದೈವನೆಂದೆನಿಸುವನ