ಕೀರ್ತನೆ - 178     
 
ನೆನೆವೆನು ಅನುದಿನ ನಿಮ್ಮ ಮಹಿಮೆಯನು-ಮಧ್ವರಾಯಾ । ಸನಕಾದಿ ಮುನಿವೃಂದ ಸೇವಿತ ಪಾದಾಬ್ಜ–ಮಧ್ವರಾಯಾ ಕಲಿಮಲದಿ ಜ್ಞಾನ ಕಲುಷಿತವಾಗಲು ಮಧ್ವರಾಯಾ | ನಳಿನಾಕ್ಷನಾಜ್ಞೆಯಿಂದಿಳೆಯೊಳಗುದಿಸಿದೆ-ಮಧ್ವರಾಯಾ ಗೋವಿತ್ತ ವಿಪ್ರಗೆ ನಿರುತ ಮೋಕ್ಷವನಿತ್ತ-ಮಧ್ವರಾಯಾ । ಜೀವೇಶರೊಂದೆಂಬ ಮತವ ಭೇದಿಸಿದೆ-ಮಧ್ವರಾಯಾ ಸೂತ್ರಾರ್ಥಂಗಳನೆಲ್ಲ ವೇತೃಗಳಿಗೆ ತಿಳಿಸಿ-ಮಧ್ವರಾಯಾ । ಶಾಸ್ತ್ರದ ತಾತ್ಪರ್ಯ ಪ್ರಕರಣ ರಚಿಸಿದೆ-ಮಧ್ವರಾಯಾ ಸುಜನರ ಹೃದಯದಿ ಸೇರಿದ್ದ ತಮಸಿಗೆ-ಮಧ್ವರಾಯಾ । ನಿಜ ಜ್ಞಾನ ರವಿಯಂತೆ ಕಿರಣವ ಹರಡಿದೆ-ಮಧ್ವರಾಯಾ ವ್ಯಾಸದೇವರಿಗಭಿವಂದಿಸಿ ಬದರಿಯಲಿ-ಮಧ್ವರಾಯಾ ॥ ಶ್ರೀಶಪುರಂದರವಿಠಲ ದಾಸನಾದೆ-ಮಧ್ವರಾಯಾ