ಘಟಿಕಾಚಲದಿ ನಿಂತ-ಶ್ರೀ ಹನುಮಂತ
ಘಟಿಕಾಚಲದಿ ನಿಂತ-ವಟು ಹನುಮಂತ
ತನ್ನ ಪಠನೆಯ ಮಾಡಲುತ್ಕಟದಿ ಪೊರೆವೆನೆಂದು (ಅ.ಪ)
ಚತುರ ಯುಗದಿ ತಾನು-ಮುಖ್ಯ ಪ್ರಾಣ- ಚತುರ ಮುಖನಯ್ಯನ ।
ಚತುರಮೂರ್ತಿಗಳನು ಚತುರತನದಿ ಭಜಿಸಿ ।
ಚತುರ್ಮುಖವಾಣಿ ಜಗಕೆ ಚತುರ್ವಿಧ ಫಲವ ಕೊಡುತ
ಸರಸಿಜಭವಗೋಸುಗ- ಕರ್ಮಠ ಧೂಮ ವರ ಚಕ್ರತೀರ್ಥಸರ |
ಮೆರೆವ ಛಲದಿ ನಿತ್ಯ ನರಹರಿಗೆದುರಾಗಿ
ಸ್ಥಿರ ಯೋಗಾಸನದಲಿ ಕರೆದು ವರಗಳ ಕೊಡುತ
ಶಂಖಚಕ್ರವ ಧರಿಸಿ-ಭಕ್ತರ ಮನಃ-ಪಂಕವ ಪರಿಹರಿಸಿ |
ಪಂಕಜನಾಭ ಶ್ರೀ ಪುರಂದರವಿಠಲನ |
ಬಿಂಕದ ಸೇವಕ ಸಂಕಟ ಕಳೆಯುತ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಹನುಮ-ಭೀಮ-ಮಧ್ವರು