ಕೀರ್ತನೆ - 175     
 
ಗೆದ್ದೆಯೊ ಹನುಮಂತಾ-ಅಸುರರ ಒದ್ದೆಯೊ ಬಲವಂತಾ ಬದ್ಧಾಂಜಲಿಯಿಂದ ರಘುಪತಿ ಪಾದವ ಹೃದ್ಯದಿ ಭಜನೆ ಮಾಡುವ ಬುದ್ಧಿವಂತ ಅಂಜನಿಸುತನೀತ-ಲಂಕಾಪುರದಿ-ಅಕ್ಷಯನ ಕೊಂದಾತ ॥ ಕಂಜಾಕ್ಷಿ ಸೀತೆಯ ಕಂಡು ಮುದ್ರಿಕೆಯಿತ್ತು | ಮಂಜುಳವಾರೆಯ ತಂದ ರಾಮನ ದೂತ ಈರೇಳು ಜಗದೊಳಗೆ-ಇನ್ನು ಮತ್ತೆ ಯಾರು ಸರಿಯೊ ನಿನಗೆ ವೀರ ಮಹಾಬಲ ಶೂರ ಪರಾಕ್ರಮ | ಧೀರ ಸಮೀರ ಉದಾರ ಗಂಭೀರ ವಾಂಛಿತ ಫಲವೀವನಾದ ಮುಖ್ಯ- ಪ್ರಾಣ ಮಹಾನುಭಾವ || ಕಿಂಚಿತ್ತು ಕಷ್ಟವ ಪಡಲೀಸ ಭಕ್ತರ್ಗೆ | ಪಾಂಚಜನ್ಯ ಪುರಂದರ ವಿಠಲದಾಸ