ಗುರುರಾಯರ ನಂಬಿರೋ-ಮಾರುತಿಯೆಂಬ
ಗುರುರಾಯರ ನಂಬಿ ಬಿಡದೆ ಯಾವಾಗಲು |
ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ
ವನಧಿಯ ಮನೋವೇಗದಿಂದ ಲಂಘಿಸಿ ಮಹಿ-
ತನುಜೆಯ ಶೋಕತಾಪವ ಕಳೆದು ॥
ವನವ ಬೇರೊಡನೆ ಕಿತ್ತೀಡಾಡಿ ಎದುರಾದ
ದನುಜರ ಸದೆದು ಲಂಕೆಯ ತನ್ನ ಸಖಗಿತ್ತ
ಕೌರವ ಬಕ ಹಿಡಿಂಬಕ ಕೀಚಕರೆಂಬ |
ಕ್ರೂರಸಂತತಿಯೆಲ್ಲ ನುಗ್ಗಲೊತ್ತಿ ॥
ಘೋರ ಪಾತಕಿ ದುಶ್ಯಾಸನ ರಕುತವ
ಹೀರಿ ಮುದದಿ ಮುರವೈರಿಯ ಭಜಿಸಿದ
ಜೀವೇಶರೊಂದೆಂಬ ದುರ್ವಾದಿಗಳ ಕು-
ಭಾವಶಾಸ್ತ್ರಗಳೆಲ್ಲ ತರಿದೋಡಿಸಿ ||
ಕೋವಿದರಿಗೆ ಸದ್ಭಾಷ್ಯ ಸುಧೆಯನಿತ್ತು
ದೇವ ಪುರಂದರವಿಠಲ ಸೇವಕನಾದ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಹನುಮ-ಭೀಮ-ಮಧ್ವರು