ಎಂಥ ಬಲವಂತನೊ-ಕುಂತಿಯ ಸಂಜಾತನೋ |
ಭಾರತಿಗೆ ಕಾಂತನೊ-ನಿತ್ಯ ಶ್ರೀಮಂತನೋ
ರಾಮಚಂದ್ರನ ಪ್ರಾಣನೊ-ಅಸುರ ಹೃದಯ ಬಾಣನೊ ।
ಖಳರ ಗಂಟಲ ಗಾಣನೊ-ಜಗದೊಳಗೆ ಪ್ರವೀಣನೊ
ಬಂಡಿಯನ್ನವನುಂಡನೊ-ಬಕನ ಪ್ರಾಣವ ಕೊಂಡನೊ |
ಭೀಮಪ್ರಚಂಡನೊ-ದ್ರೌಪದಿಗೆ ಗಂಡನೊ
ಕುಂತಿಯ ಕಂದನೊ ಸೌಗಂಧಿಕವ ತಂದನೋ ।
ಕುರುಕ್ಷೇತ್ರಕ್ಕೆ ಬಂದನೊ-ಕೌರವರ ಕೊಂದನೋ
ವೈಷ್ಣವಾಗ್ರಗಣ್ಯನೋ-ಸಂಚಿತಾಗ್ರಪುಣ್ಯನೋ ।
ದೇವವರೇಣ್ಯನೊ-ದೇವ ಶರಣ್ಯನೋ
ಮಧ್ವಶಾಸ್ತ್ರವ ರಚಿಸಿದನೊ-ಸದ್ವೈಷ್ಣವರ ಸಲಹಿದನೊ ।
ಉಡುಪಿ ಕೃಷ್ಣನ ನಿಲಿಸಿದನೊ-ಪುರಂದರ
ವಿಠಲನ ಒಲಿಸಿದನೊ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಹನುಮ-ಭೀಮ-ಮಧ್ವರು