ಕೀರ್ತನೆ - 167     
 
ಅಂಜಿಕಿನ್ನೇತಕಯ್ಯ-ಸಜ್ಜನರಿಗೆ | ಅಂಜಿಕಿನ್ನೇತಕಯ್ಯ ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ ಕನಸಿನೊಳ್ ಮನಸಿನೊಳ್ ಕಳವಳವೇತಕೆ ಹನುಮನ ನೆನೆದರೆ ಹಾರಿ ಹೋಹುದು ಪಾಪ ರೋಮ ರೋಮಕೆ ಕೋಟಿ ಲಿಂಗವುದುರಿಸಿದ ಭೀಮನ ನೆನೆದರೆ ಬಿಟ್ಟು ಹೋಹುದು ಪಾಪ ಪುರಂದರವಿಠಲನ ಪೂಜೆಯ ಮಾಡುವ ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ