ಭಾಗ್ಯದ ಲಕ್ಷ್ಮೀ ಬಾರಮ್ಮಾ - ನಮ್ಮಮ್ಮಾ ನೀ ಸೌ -
ಭಾಗ್ಯದ ಲಕ್ಷ್ಮೀ ಬಾರಮ್ಮಾ
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ |
ಗೆಜ್ಜೆಯ ಕಾಲಿನ ಧ್ವನಿಯ ಮಾಡುತ ||
ಸಜ್ಜನ ಸಾಧು ಪೂಜೆಯ ವೇಳೆಗೆ |
ಮಜ್ಜಿಗೆಯೊಳಗಿನ ಬೆಣ್ಣೆಯಂತೆ
ಕನಕವೃಷ್ಟಿಯ ಕರೆಯುತ ಬಾರೆ |
ಮನಕೆ ಮತಿಯ ಸಿದ್ದಿಯ ತೋರೆ||
ದಿನಕರ ಕೋಟಿ ತೇಜದಿ ಹೊಳೆಯುತ |
ಜನಕರಾಜನ ಕುಮಾರಿ ಸೀತೆ
ಸಂಖ್ಯೆಯಿಲ್ಲದಾ ಭಾಗ್ಯವ ಕೊಟ್ಟು |
ಕಂಕಣ ಕೈಯಾ ತಿರುವುತ ಬಾರೆ ।
ಕುಂಕುಮಾಂಕಿತೇ ಪಂಕಜಲೋಚನೆ |
ವೆಂಕಟರಾಯನ ಮೋಹದ ರಾಣಿ
ಅತ್ತಿತ್ತಗಲದೆ ಭಕ್ತರ ಮನೆಯಲಿ |
ನಿತ್ಯಮಂಗಲವು ನಿತ್ಯ ಮಹೋತ್ಸವ ॥
ಸತ್ಯವ ತೋರುವ ಸಜ್ಜನರಿಗೆ ನೀ ।
ಚಿತ್ತದಿ ಹೊಳೆಯುವ ಪುತ್ಥಳಿಗೊಂಬೆ
ಸಕ್ಕರೆ ತುಪ್ಪದ ಕಾಲುವೆ ಹರಿಸಿ |
ಶುಕ್ರವಾರದ ಪೂಜೆಯ ಕೊಂಬೆ ॥
ಆಕ್ಕರವುಳ್ಳ ಅಳಗಿರಿ ರಂಗನ
ಶಕ್ತ ಪುರಂದರ ವಿಠಲನ ರಾಣಿ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಶ್ರೀ ಲಕ್ಷ್ಮೀದೇವಿ ಸ್ತುತಿ