ಕೀರ್ತನೆ - 164     
 
ಏನೆಂದಳಯ್ಯ ಸೀತೆ | ನಿನಗೇನ ಮಾಡಿದಳೊ ಪ್ರೀತೆ ದಾನವನ ಪುರದೊಳಗೆ ದಾರಿಯನು ನೋಡುತಲೆ | ಧ್ಯಾನವನು ಮಾಡುತಿಹಳೊ ಹನುಮಾ ಎಲ್ಲಿಂದ ಬಂದೆ ಹನುಮಾ ನೀಯೆನ್ನ - ಕೇಳುಸೊಲ್ಲೆನ್ನ ಪ್ರೇಮ || ವಲ್ಲಭನ ನೆನೆದರೆ ನಿಮಿಷ ಯುಗವಾಗುತಿದೆ ನಿಲ್ಲಲಾರೆನು ಎಂದಳೊ ಹನುಮಾ ದೇವರಾಯನ ಪಾದವ - ಎಲೆ ಕಪಿಯೆ - ದಾವಪರಿಯಲಿ ಕಾಂಬೆನೊ || ರಾವಣನ ಶಿರವರಿದು ಲಂಕಪಟ್ಟಣವನೆಲ್ಲ । ಹವನವಮಾಡಿಸು ಎಂದಳೊ ಹನುಮಾ ॥ ಅಂಜನಾತನಯ ಕೇಳೊ - ನೀ ಹೋಗಿ- ಕಂಜನಾಭನಿಗೆ ಪೇಳೊ || ಕುಂಜರವಕಾಯ್ದ ಶ್ರೀಪುರಂದರವಿಠಲನ | ಪಂಜರದ ಗಿಣಿಯೆಂದಳೊ ಹನುಮಾ