ಕೀರ್ತನೆ - 163     
 
ಏನು ಧನ್ಯಳೋ - ಲಕುಮಿ ಎಂಥ ಮಾನ್ಯಳೋ ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳೊ ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ । ಸಾಟಿಯಿಲ್ಲದೆ ಪೂರ್ಲಗುಣಳು ಸರ್ವಕಾಲ ಮಾಡುತಿಹಳು ಛತ್ರ ಚಾಮರ ವ್ಯಜನ ಪರ‍್ಲಂಕ ಪಾತ್ರರೂಪದಲ್ಲಿ ನಿಂತು | ಚಿತ್ರಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು ಸರುವಸ್ಥಳದಿ ವ್ಯಾಪ್ತನಾದ । ಸರುವದೋಷರಹಿತನಾದ । ಗರುಡಗಮನನಾದ ಪುರಂದರವಿಠಲನ ಸೇವಿಸುವಳೋ