ಕೀರ್ತನೆ - 155     
 
ಹಿಂದಿನ ಬವಣೆಗಳೆಲ್ಲ ಆಗಲೆ ಮರೆದೆಯೇನೊ । ಇಂದು ಬಂದ ಭಾಗ್ಯವು ನಿಜವೆ ವೆಂಕಟತಂದೆ? ತಲೆಗೆ ಹುಲಗಲ ಹೂವ ಕಟ್ಟೆ ತುರುಗಳ ಕಾಯುತಲಿದ್ದೆ | ಹಲವು ರತ್ನದ ಮುಕುಟ ಈಗ ಇಟ್ಟಿಹೆನೆಂದು ಒಪ್ಪಿಡಿ ಅವಲಕ್ಕಿಯನು ಒಪ್ಪದಿಂದ ಸವಿದೇ ಸವಿದೆ | ತಪ್ಪದೆ ಪಂಚಾಮೃತ ಉಂಡು ಸೊಕ್ಕಿದೆನೆಂದು ಭಾಗ್ಯವು ಬಂದರೆ ಭಕ್ತರನು ಮರೆವರೆ ಸೌ-| ಭಾಗ್ಯವಂತ ನೀನು ಪುರಂದರ ವಿಠಲ