ಕೀರ್ತನೆ - 152     
 
ಸೆರಗ ಬಿಡಯ್ಯ ಕೃಷ್ಣ - ಕರೆಯಲು ಪೋಪೆನು | ಕರುಗಳು ಹಸಿದಿವೆ ಕರುಣಿಗಳರಸನೆ ಕೆನೆಮೊಸರನೆ ಕಡೆದು ನಿನಗೀವೆ ಬೆಣ್ಣೆಯ । ಗೊನೆಯ ಬಾಳೆಯ ಹಣ್ಣ ತಿನಲು ಕೊಡುವೆ ।। ನೆನೆಗಡಲೆ ಕೊಬ್ಬರಿ ನಿನಗೆ ಮೆಲಲಿಕ್ಕುವೆ । ತನಯರೊಡನೆ ಆಡಕಳುಹುವೆ ರಂಗಯ್ಯ ಗೋವಳರೆಲ್ಲ ಬಂದು ಬಾಗಿಲೊಳಗೆ ನಿಂದು | ಗೋವುಗಳನು ಬಿಡಲು ಸಾರುತಿಹರು | ನೋವುಗೊಳಿಸಬೇಡ ಪರರ ಮಕ್ಕಳ ನೀನು | ಭಾವಜನಯ್ಯನೆ ಲಾಲಿಸೀ ನುಡಿಯನು ಶರಧಿಯ ತಡಿಯಲಿ ನೆರೆದಿಪ್ಪ ಸತಿಯರ | ಪರಿಪರಿ ವಸ್ತ್ರವ ಸೆಳೆಯಬೇಡ | ನೆರೆಮನೆ ಹೊರೆಮನೆ ಕರುಗಳ ಬಿಡಬೇಡ | ಸುರರಿಗೊಡೆಯ ನಮ್ಮ ಪುರಂದರವಿಠಲ