ಕೀರ್ತನೆ - 150     
 
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ ಭಕ್ತವತ್ಸಲ ದೇವನು ಮಕ್ಕಳ ಚೆಂಡಿಕೆ ಮರದ ಕೊನೆಗೆ ಕಟ್ಟಿ 1 ಗಕ್ಕನೆ ಕೃಷ್ಣ ಚಪ್ಪಾಳಿಕ್ಕಿದನಮ್ಮ ಹೆಣ್ಣು ಮಕ್ಕಳು ಬಚ್ಚಲೊಳಗೆಣ್ಣೆ ಮಂಡೆಯೊಳು | ಬಣ್ಣವಸ್ತ್ರವ ಬಿಚ್ಚಿ ಬರಿಮೈಯಲಿರುತಿರೆ ॥ ಕಣ್ಣಿಗೆ ಬಿಸಿನೀರ ಚೆಲ್ಲಿ ಸೀರೆಯನೊಯ್ದು । ಉನ್ನತವಾದ ವೃಕ್ಷವನೇರಿದನೆ ರಂಗ ಪಟ್ಟೆಮಂಚದ ಮೇಲೆ ಪತಿಯಂತೆ ಕುಳಿತಿರುವ | ಎಷ್ಟು ಸ್ವಾತಂತ್ರ್ಯವೆ ಗೋಪಿ | ಉಟ್ಟ ಸೀರೆಯನೆಳೆದು ಬಟ್ಟಕುಚವ ಪಿಡಿದು । ಅಷ್ಟು ಮಂದಿಗಳೊಳಗೆ ಗಟ್ಟಿ ಅಪ್ಪಿಕೊಂಡನೆ ಸಡಗರದಿಂದ ಗೋವಳಿತಿಯರೊಡಗೂಡಿ । ನುಡಿಸುತ ಕೊಳಲನು ಪುರದೊಳಗೆ || ಕಡೆವ ಮಡದಿಯರ ಕೈ ಪಿಡಿದಾಡುವ । ಒಡೆಯನೆ ನಮ್ಮ ಶ್ರೀಪುರಂದರವಿಠಲ