ಸಾಕು ಮಾಡಿರವ್ವ ರಂಗನ | ಏಕೆ ದೂರುವಿರೆ?
ಬೆಟ್ಟು ಬಾಯೊಳಗಿಟ್ಟರೆ ರಂಗ -ಕಚ್ಚಲರಿಯನೆ |
ಕಟ್ಟಿರುವೆಯನು ಕಂಡರೆ ಬವ್ವೆಂದು - ಚಿಟ್ಟನೆ ಚೀರುವನೆ |
ರಟ್ಟೆಯ ಹಿಡಿದು ನಡೆಸಲು ರಂಗ - ದಟ್ಟಡಿ ಇಕ್ಕುವನೆ |
ಭ್ರಷ್ಟ ಮಾತುಗಳನೆಷ್ಟೋ ಕಲ್ಪಿಸಿ |
ಪಟ್ಟ ಪಟ್ಟಿಗೆ ರಟ್ಟು ಮಾಡುವುದು
ಅರಿಯದಂತೆ ನೊರೆಹಾಲನು ಕುಡಿವರೆ -
ಕರೆಕರೆ ಮಾಡುವನೆ |
ಇರಲು ಮನೆಯೊಳಗೆ ಬರುತ ನಿಮ್ಮ ಮನೆ - ಮೊಸರನು
-------------------------- ಸುರಿಯವನೆ ||
ಸರಸಿಜಾಕ್ಷಿಯರೆ ಪರಿಪರಿಯಿಂದಲಿ |
ಹರಲಿ ಮಾಡುವುದಿದು ತರವೇನಮ್ಮ
ಚಿಕ್ಕ ಚಿಕ್ಕ ಗೋವಕ್ಕಳ ಕೂಡ ಚೆಂಡನಾಡುವಾಗ ।
-----------------------------
----------------------------
ಸಿಕ್ಕಿತೆನುತ ಬಹು ಚಕ್ಕಂದಾಡುತ |
ಗಕ್ಕನೆ ಹೋಗಿ ಕೈಯಿಕ್ಕಿ ತೆಗೆದನೆ
ಮಾಲೆಗಂಬದೋಪಾದಿಯಲಿ ನೀವು ಬಹಳ ಬೆಳೆದಿರೀಗ |
ನೀಲಕುಂತಳೆಯೆ ದಧಿಶೋಧಿಸಿ ಓಲಾಡುತ ಕಡೆವಾಗ
ಬಾಲಕೃಷ್ಣನಿಗೆ ಜೋಲುವ ಕುಚಗಳು |
ನಿಲುಕುವ ಬಗೆ ಹೇಗೆ? |
ಖೂಳ ಸೆಟವಿಯರು ಕಾಳವಾಗಿಹರು |
ಕೇಳಿಕೇಳಿ ಬೇಸತ್ತಿಹೆನಮ್ಮ
ಫುಲ್ಲನಾಭನಿವ ಒಲ್ಲದನಾದರೆ ಎಲ್ಲಿ ಒಯ್ದಿಡಬೇಕೆ? ।
ಖುಲ್ಲತನದಿ ನೀವ್ ನಿಲ್ಲಗೊಡದಿಹಿರಿ ಗುಲ್ಲುತನವು ಸಾಕೆ ॥
--------------------------------
ಸಲ್ಲದು ಈ ನುಡಿ ಪುರಂದರವಿಠಲಗೆ |
ಹಲ್ಲೊಳಗಾತನ ಇಟ್ಟಿರಬೇಡಿ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ