ಸದ್ದು ಮಾಡಲು ಬೇಡವೊ - ನಿನ್ನ ಕಾಲಿಗೆ |
ಬಿದ್ದು ನಾ ಬೇಡಿಕೊಂಬೆ
ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂ-|
ದಿದ್ದದ್ದು ಕಂಡರೇನೆಂಬುವರೊ ರಂಗ
ಬಳೆ ಘಲ್ಲುಕೆನ್ನದೇನೊ-ಕೈಯ ಪಿಡಿದು |
ಎಳೆಯದಿರೊ ಸುಮ್ಮನೆ ॥
ಮೊಲೆಗಳ ಮೇಲಿನ ಸೆರಗನೆಳೆಯಲು ಕೊ-|
ರಳ ಪದಕಂಗಳು ಧ್ವನಿಗೆಯ್ಯುವುವೊ ರಂಗ
ನಿರಿಗೆಯ ಪಿಡಿಯದಿರೊ ಕಾಂಚಿಯ ದಾಮ ।
ಕಿರುಗಂಟೆ ಧ್ವನಿಗೆಯ್ಯದೆ? ॥
ಕಿರುದುಟಿಗಳ ನೀನು ಸವಿದು ಚಪ್ಪರಿಸಲು |
ತರವಲ್ಲ ಗಂಡ ಮತ್ಸರವ ತಾಳುವನಲ್ಲ
ನಾಡ ಮಾತುಗಳೇತಕೊ - ಸಂಗೀತವ |
ಪಾಡುವ ಸಮಯವೇನೊ ||
ಗಾಡಿಕಾರ ಶ್ರೀ ಪುರಂದರವಿಠಲನೆ |
ಪಾಡು ಪಂಥಗಳೆ ಒಡಗೂಡುವ ಸಮಯದಿ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ