ಸಣ್ಣವನ ಮತವಲ್ಲ ಸಾರಿ ಹೇಳಮ್ಮ |
ಕಣ್ಣ ಮುಚ್ಚಿ ಆಡುವಾಗ ಕಾಕು ಮಾಡಲೇತಕಮ್ಮ
ಮೊಸರ ಕದ್ದರೆ ನಾವು ಮೊರೆಯಿಡ ಬಂದುದಿಲ್ಲ |
ಪೊಸ ಕುಚಗಳ ಮುಟ್ಟಿ ಪೋಗಲೀಸನಮ್ಮ ||
ಹಸು ಮಗನರಿಯದೆ ಆವಾಗಲೂ ಪಿಡಿವ |
ಬಿಸರುಹ ಮೊಗ್ಗೆಯೆಂದು ಪಿಡಿದಡೇನಾಯ್ತಮ್ಮ
ನವನೀತ ಬೇಡಿದರೆ ನಾವೇನೆಂಬುದಿಲ್ಲ |
ಯುವತಿಯರಧರವ ಬೇಡಬೇಕೆ? ॥
ಅವನಾವಾಗಲೂ ಮೆಲ್ವ ಆಲದ ಪಣ್ಣೆಂದು ।
ಸವಿಗಂಡು ಬೇಡಿದರೆ ಸಾಧಿಸಲೇತಕಮ್ಮ
ಭೂಮಿಗೆ ಲಂಡನು ನಮ್ಮ ಪುರುಷರಿಲ್ಲದ ವೇಳೆ |
ಕಾಮಿಸಿ ಗಂಡನಂದದಿ ಕರೆಯುತೈದಾನೆ |
ಪ್ರೇಮದಿ ಪುರಂದರವಿಠಲನ ನೆನೆದರೆ |
ಕಾಮಿನಿಯರಿಗೆ ಕಲ್ಪವೃಕ್ಷ ಕೈಸೇರುವಂತೆ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ