ಕೀರ್ತನೆ - 144     
 
ವೃಂದಾವನದೊಳಾಡುವನಾರೆ ಗೋಪ-| ಚಂದಿರವದನೆ ನೋಡುವ ಬಾರೆ ಅರುಣಪಲ್ಲವ ಪಾದಯುಗಳನೆ ದಿವ್ಯ-| ಮರಕತ ಮಂಜುಳಾಭರಣನೆ ॥ ಸಿರಿವರ ಯದುಕುಲ ಸೋಮನೆ ಇಂಥ-| ಪರಿಪೂರ್ಣ ಕಾಮ ನಿಸ್ಸೀಮನೆ ಹಾರ-ಹೀರ ಗುಣಧಾರನೆ – ದಿವ್ಯ | ಸಾರಶರೀರ ಶೃಂಗಾರನೆ || ಆರಿಗಾದರು ಮನೋದೂರನೆ ತನ್ನ-1 ಸೇರಿದವರ ಮಾತ ಮೀರನೆ ಮಕರ ಕುಂಡಲ ಕಾಂತಿ ಭರಿತನೆ – ದಿವ್ಯ | ಆಕಳಂಕರೂಪ ಲಾವಣ್ಯನೆ ॥ ಸಕಲರೊಳಗೆ ದೇವನೀತನೆ – ನಮ್ಮ | ಮುಕುತೀಶ ಪುರಂದರ ವಿಠಲನೆ