ಕೀರ್ತನೆ - 143     
 
ಲಾಲಿಸಿದಳು ಮಗನ - ಯಶೋದೆ | ಲಾಲಿಸಿದಳು ಮಗನ ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು | ತರಳನ ಮೈಸಿರಿ ತರುಣಿ ನೋಡುತೆ ಹಿಗ್ಗಿ ಬಾಲಕನೇ ಕೆನೆವಾಲ ಮೊಸರನೀವೇ । ಲೀಲೆಯಿಂದಲಿ ಎನ್ನ ತೋಳಮೇಲ್ಮಲಗೆಂದು ಮುಗುಳುನಗೆಯಿಂದಲಿ ಮುದ್ದು ತಾ ತಾರೆಂದು | ಜಗದೊಡೆಯನ ಶ್ರೀ ಪುರಂದರವಿಠಲನ