ರಂಗ ರಥವನೇರಿದನಕ್ಕ- ಮೋಹ- |
ನಾಂಗ ನಮ್ಮ ಸೇರದೆ ಪೋಗುವನಕ್ಕ
ಮಾತುಳ ಮಥುರೆಯೊಳಿಹನಂತೆ - ಅಲ್ಲಿ |
ಮಾತಾಪಿತರಿಗೆ ಬಂಧನವಂತೆ, ಇವರು 1
ನೂತನ ಬಿಲ್ಲಿನ ಅರ್ಥಿಗಳಂತೆ ||
ಪೀತಾಂಬರಧರನ ಪೂಜೆ ನೋಡುವೆನೆಂಬ |
ಆತುರದಿಂದಿರೆ ಅಕ್ರೂರನೊಡನೆ ಈಗ
ಬಲರಾಮ ಬಂಧುವಿನೊಡಗೂಡಿ ನಂದ-|
ನಡಿಗೆ ಯಶೋದೆಗೆ ವಂದನೆ ಮಾಡಿ-ತಾವು !
ಬಿಡಲಾರೆವೆಂದು ಭಾಷೆಯ ನೀಡಿ ॥
ತಡೆಯೆನೆನುತ ತಾಯಿಗೆ ಭರವಸೆಯಿತ್ತು ।
ಕಡಲಶಯನನು ಕಾತರದಿಂದಲಿ ಈಗ
ಮಧುರಾ ಪಟ್ಟಣದ ಮಾನಿನಿಯರು ಅತಿ |
ಚದುರೆ ಚಂಚಲೆ ಚಾಪಲತೆಯರು-ನಮ್ಮ |
ಮದನನಯ್ಯನ ಮೋಹಿಸುತಿಹರು ॥
ಕಧಿಜನಾಭ ನಮ್ಮ ಪುರಂದರವಿಠಲ ।
ಪದುಮನಾಭನ ಪಯಣವ ನಿಲ್ಲಿಸಕ್ಕ
Music
Courtesy:
ಸ್ಥಲ -
ಕೀರ್ತನೆ
ವಿಷಯ -
ಕೃಷ್ಣಲೀಲೆ