ಕೀರ್ತನೆ - 135     
 
ಮಾಧವ ಮಧುಸೂದನ- ಯಾದವಕುಲರನ್ನ ಯ-| ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ ಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ | ಮುಂಗೈಯವಾಕು ಬೆರಳ ಹೊನ್ನುಂಗರ | ಝಂಗಿಪ ಹುರಿಗೆಜ್ಜೆ ಉಡಿದಾರವನು ಕಂಡು । ಅಂಗನೆಯರು ನಿನ್ನನೊಯ್ವರೊ || ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು । ಡಿಂಗರಿಗರು ಕಂಡರೆ ಬಿಡರೊ ನಿ- 11 ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ | ಕಂಗಳ ಸಿರಿಯೆ ಬಾರೋ- ರಂಗಯ್ಯ ಬಾಲಕರೊಡನಾಟ ಸಾಕು ಬಾ ಬಾರೈಯ | ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ || ಕೀಲುಮಾಗಾಯಿ- ಮಾಣಿಕ ಪುಲಿಯುಗುರ ಕಂಡು | ಸೋಲ್ವರೊ ನಿನಗೇಸೋ ಸೋಗೆಯರು ॥ ಶ್ರೀಲೋಲ ನಿನ್ನಲಿ ಕಂಸನ ತುಂಬಿದೊ-1 ಡೋಲಗದೊಳು ರಕ್ಕಸರು ಪಂಥವನಾಡೆ || ವೀಳ್ಯವ ಪಿಡಿದೆ ಕೊಲುವೆನೆಂದು ನಿನ್ನಯ | ಕಾಲಿಗೆ ಎರಗುವೆ ಬಾರೊ ರಂಗಯ್ಯ ಬೊಮ್ಮದ ಮರಿಯೆ ವಿಶ್ವವನೆಲ್ಲ ಹೃದಯದೊ-। ಳೊಮ್ಮೆ ತೋರುವನೆಂದು ಕಂಡು ನಾ ಬಲ್ಲೆ || ಎಮ್ಮ ಮನಕೆ ಅಹಲ್ಲಾದನು ನೀನೆ | ಉಮ್ಮಯದಿಂ ಭಾಗವತರ ಪಾಲಿಸುತಿಪ್ಪ-॥ ಗಮ್ಯಗೋಚರ ಸಿರಿಪುರಂದರವಿಠಲ ತೊರೆ-I ದಮ್ಮಿಯ ಕೊಡುವೆನು ಬಾರೋ ರಂಗಯ್ಯ